ಪಾದುವ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ 'ಮಾನಸಿಕ ಆರೋಗ್ಯಕ್ಕಾಗಿ ಮನೋಲ್ಲಾಸದ ಚಟುವಟಿಕೆ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದಿನ ಮಹಾಮಾರಿಯಂತಹ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸು ವಿಚಲಿತವಾಗದಂತೆ ಅವರನ್ನು ಶೈಕ್ಷಣಿಕ ಚಟುವಟಿಕೆಗಳತ್ತ ಸೆಳೆಯುವ ನಿಟ್ಟಿನಲ್ಲಿ ಗೂಗಲ್ ಮೀಟ್ ಜಾಲತಾಣದ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆಪ್ತ ಸಲಹೆಗಾರ ಶ್ರೀ ಅಂಕಿತ್ ಸುವರ್ಣ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಕ್ಷಮತೆಯ ಬಗ್ಗೆ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಆಲ್ವಿನ್ ಸೆರಾವೊ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಈ ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಲು ಕರೆಯಿಟ್ಟರು. ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರಾದ ಡಾ. ನಾಗರತ್ನ ಕೆ. ಎ. ಉಪಸ್ಥಿತರಿದ್ದರು. ರಾ. ಸೇ. ಯೋ. ಘಟಕದ ಸಂಯೋಜನಾಧಿಕಾರಿಯಾದ ಶ್ರೀ ರೋಶನ್ ಸಾಂತುಮಯೋರ್ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ರೂಪಿಸಿದರು. ಸಹಸಂಯೋಜನಾಧಿಕಾರಿಯಾದ ರೇಷ್ಮಾ ಡಿಸೋಜ ಕಾರ್ಯಕ್ರಮ ನಿರೂಪಣೆ ಮಾಡಿದರು. ಸ್ವಯಂ ಸೇವಕ ಅಕ್ಷಯ್ ವಂದನಾರ್ಪಣೆ ಮಾಡಿದರು. ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಜೆಸ್ಫ್ರಿಡಾ ಮಿನೆಜಸ್ ತಾಂತ್ರಿಕ ನೆರವು ನೀಡಿದರು.

Home | News | Sitemap | Contact Us

Copyright © 2016 - www.paduadegreecollege.org . Powered by eCreators

Contact Us

PADUA COLLEGE OF COMMERCE AND MANAGEMENT
Nanthur, Mangaluru-575004

PH: FAX: 2217711

Email: [email protected]
           [email protected]