ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಪಾದುವಾ ಕೊಲೇಜ್ ಆಫ್ ಕೋಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2018-19ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ನಯನಾಡು ಇಲ್ಲಿ ಸಂಪನ್ನಗೊಂಡಿತು.
ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ವಿನ್ಸೆಂಟ್ ಮೊಂತೇರೋರವರು ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್ ನಯನಾಡು ಇಲ್ಲಿನ ಧರ್ಮಗುರುಗಳಾದ ವಂದನೀಯ ಸಂತೋಷ್ ಮಿನೇಜಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತುಂಗಪ್ಪ ಬಂಗೇರ, ನಯನಾಡು ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ.ಸೈಮನ್ ಮೋರಾಸ್, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್ ಮೋಂತಿ ಡಿಸೋಜ, ನಯನಾ ಬೇಕರಿಯ ಮಾಲಕರಾದ ಶ್ರೀಮ ಸಿಲ್ವೆಸ್ಟರ್ ಪಿಂಟೊ ಹಾಗೂ ಪುಂಜಾಲಕಟ್ಟೆಯ ಠಾಣಾಧಿಕಾರಿಯಾದ ಶ್ರೀಮತಿ ಸೌಮ್ಯ ಇವರು ಉಪಸ್ಥಿತರಿದ್ದರು.
ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೈಜ ಘಟನೆಯನ್ನು ವಿವರಿಸುತ್ತಾ ಠಾಣಾಧಿಕಾರಿ ವಿಧ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಚಿಕ್ಕ ಕಥೆಯ ಮೂಲಕ ಸಿಸ್ಟರ್ ಮೋಂತಿಯವರು ಸೇವೆಯ ಮಹತ್ವದ ಬಗೆಗಿನ ಅರಿವನ್ನು ವಿಧ್ಯಾರ್ಥಿಗಳಲ್ಲಿ ಮೂಡಿಸಿದರು. ಸುಮಾರು 95 ರಾಷ್ಟ್ರೀಯ ಸ್ವಯಂ ಸೇವಕರು ಈ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ. ರೋಶನ್ ಸಾಂತುಮಾಯರ್ ಎಲ್ಲಾರನ್ನು ಸ್ವಾಗತಿಸಿದರು. ಸಹ ಸಂಯೋಜನಾಧಿಕಾರಿಯಾದ ಶ್ರೀ. ರಾಹುಲ್ ವಂದಿಸಿದರು. ಪ್ರಾಧ್ಯಾಪಕಿ ಕು. ಮಿಶಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.