30th August 2019, Padua College of Commerce and Management organized Talents Day. To grace this special occasion we had amongst us Shree Arvind Bolar- a famous Tulu actor. Our Correspondent Rev. Fr. Vincent Montheiro presided over the function. There were a total of 14 inter-class competitions and the incharge was given to various clubs. The different competition were – Padua got talent, quiz competition, vegetable carving, collage making, turn-coat, best manager, cartooning, photography, poster making, mock press, mad ads, group dance and face painting. All the club directors and volunteers organized the competition in a best possible and innovative way. All the students enthusiastically participated in the events. The winners were announced by the principal on the same day after all the competitions.
*ಪಾದುವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ:*
ಯಾರಿಗೆ ಅವಕಾಶ ಸಿಗುತ್ತೋ ಅವರು ಬೆಳೆಯುತ್ತಾರೆ ಸಮಾಜದ ಮುಂದೆ ಪ್ರಸಿದ್ದಿಯನ್ನು ಗಳಿಸುತ್ತಾರೆ, ಆದರೆ ಪ್ರಸಿಧ್ದಿ ಪಡೆದವರು ಅವರಿಗೆ ಯಾರು ಅವಕಾಶ ಕೊಡುತ್ತಾರೋ ಅವರನ್ನು ತಾವು ಎಂದೂ ಮರೆಯಬಾರದು, ಆ ಸಂಸ್ಕ್ರತಿ ನಮ್ಮದಾಗಬಾರದು ಎಂದು ಪ್ರಸಿದ್ದ ಸಿನೇಮಾ ಹಾಗೂ ರಂಗನಟ *ಶ್ರೀ ಅರವಿಂದ ಬೋಳಾರ್* ಇವರು *ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್* ಇಲ್ಲಿನ ಪ್ರಸಕ್ತ ವರ್ಷದ ಪ್ರತಿಭಾ ದಿನಾಚರಣೆಯ ಮುಖ್ಯ ಉದ್ಘಾಟಕರಾಗಿ ತಮ್ಮ ಅಭಿಪ್ರಾಯವನ್ನಿತ್ತರು. ಹಾಗೆಯೇ ಈಗಿನ ಯುವಜನರು ತಾಂತ್ರಿಕ ಉಪಕರಣಗಳಿಗೆ ಬಲಿಯಾಗದೇ, ಮನುಷ್ಯ ಸಂಬಂಧಗಳಿಗೆ ಬೆಲೆ ಕೊಟ್ಟು ಜೀವನವನ್ನು ಮುನ್ನೆಡಸಲು ವಿಧ್ಯಾರ್ಥಿಗಳಿಗೆ ಕರೆಯಿತ್ತರು. ಕಾಲೇಜಿನ ಪ್ರಾಂಶುಪಾಲರಾದ *ವಂದನೀಯ ಫಾ. ಆಲ್ವಿನ್ ಸೆರಾವೊರವರು* ವಿಧ್ಯಾರ್ಥಿಗಳಿಗೆ ಸ್ಪರ್ಧಾಮನೋಭಾವದಿಂದ ದಿನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ *ವಂದನೀಯ ವಿನ್ಸೆಂಟ್ ಮೊಂತೇರೊರವರು* ನಮ್ಮ ಪ್ರತಿಭೆಗಳು ಒಂದು ಸದೃಢ ಸಮಾಜ ರೂಪಿಸುವಲ್ಲಿ ಸಹಕಾರಿಯಾಗಲಿ ಎಂದು ಸ್ಪರ್ಧಾಳುಗಳಿಗೆ ಶುಭಕೋರಿದರು. ಉಪಪ್ರಾಂಶುಪಾಲರಾದ *ಶ್ರೀ. ರೋಶನ್ ಸಾಂತುಮಾಯರ್* ರವರು ಪ್ರತಿಭಾ ದಿನಾಚರಣೆಯ ಬಗ್ಗೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾಲೇಜಿನ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ *ಮೆಲ್ಸ್ಟನ್* ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿಯಾದ *ಡೆಲ್ವಿನ್* ಹಾಗೂ ಕಾರ್ಯಕ್ರಮದ ಸಂಚಾಲಕರಾದ ಉಪನ್ಯಾಸಕ *ಶ್ರೀ. ರಾಹುಲ್* ಹಾಗೂ ಉಪನ್ಯಾಸಕಿ *ಕು. ರೇಶ್ಮಾ* ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಾದ *ಕು. ಗೀತಾ ಶೆಣೈ* ಹಾಗೂ *ಓಶ್ಟಿನ್* ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಕು. ರೇಶ್ಮಾ ವಂದನಾರ್ಪಣೆಗೈದರು. *ಸಭಾ ಕಾರ್ಯಕ್ರಮದ ಬಳಿಕ ವಿಧ್ಯಾರ್ಥಿಗಳಿಗೆ ಸುಮಾರು 14 ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.*