ಮಾ.08, 2018: ಪಾದುವ ಕೊಲೆಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೆಜ್‌ಮೆಂಟ್ ಇದರ ನಾಟಕ ತಂಡ *ಪಾದುವ ರಂಗ ಅಧ್ಯಯನ ಕೇಂದ್ರ* ಆಯೋಜಿಸಿದ 3 ನಾಟಕಗಳ ಉತ್ಸವ ತಂಡದ ವಿಧ್ಯಾರ್ಥಿಗಳು ಅಭಿನಯಿಸಿದ "ಆದಾಂವ್ ಆನಿ ಏವ್" ನಾಟಕದೊಂದಿಗೆ ಸಂಪನ್ನಗೊಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ, ಸಾಹಿತಿ ಟೈಟಸ್ ನೊರೊನ್ಹಾರವರು ಕಾಲೇಜಿನಲ್ಲಿ ರಂಗಭೂಮಿಯ ಚಟುವಟಿಕೆಗಳನ್ನು ನಡೆಸಿ, ಯುವ ಮನಸ್ಸುಗಳಿಗೆ ಚಿಂತನಾತ್ಮಕ ರಂಗಕೃತಿಗಳನ್ನು ಒದಗಿಸಿ, ಅವರ ಚಿಂತನೆಗಳನ್ನು ಬದಲಾಯಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ನಾಟಕ ರಚನಕಾರರೂ ಆದ ರೆ.ಫಾ.ಆಲ್ವಿನ್ ಸೆರಾವೊರವರು ನೆರೆದ ಪ್ರೇಕ್ಷಕರನ್ನು ಸ್ವಾಗತಿಸಿದರು. ಬಳಿಕ ನೆರೆದ ಸುಮಾರು ಒಂದೂವರೆ ಸಾವಿರದಷ್ಟು ಪ್ರೇಕ್ಷಕರ ಎದುರು, ಕಾಲೇಜಿನ ಸುಮಾರು 35 ವಿಧ್ಯಾರ್ಥಿಗಳು ಅಭಿನಯಿಸಿದ "ಆದಾಂವ್ ಆನಿ ಏವ್" ನಾಟಕ ಪ್ರದರ್ಶನಗೊಂಡಿತು. ಈ ನಾಟಕವು ಪ್ರಪಂಚದ ಉಗಮದ ಕಥಾ ಹಂದರವನ್ನು ಒಳಗೊಂಡಿದ್ದರೂ, ಈಗಿನ ಪ್ರಸ್ತುತ ಕಾಲಕ್ಕೆ ಸರಿಹೊಂದುವಂತೆ, ಪುಣೆಯಲ್ಲಿ ನೆಲೆಸಿರುವ ರೆ.ಫಾ.ಸಿರಿಲ್ ದೆಬ್ರುಲೆ ರವರು ಇಂಗ್ಲೀಷಿನಲ್ಲಿ ರಚಿಸಿದ್ದನ್ನು ರೆ.ಫಾ.ಆಲ್ವಿನ್ ಸೆರಾವೊ ರವರು ಕೊಂಕಣಿಗೆ ಅನುವಾದಿಸಿ, ಕ್ರಿಸ್ಟೋಫರ್ ನೀನಾಸಮ್ ನಿರ್ದೇಶಿಸಿದ್ದರು. ಈ ಮೊದಲು ಈ ನಾಟಕೋತ್ಸವದಲ್ಲಿ ಪಾದುವ ರಂಗ ಅಧ್ಯಯನ ಕೇಂದ್ರದ ಈ ವರ್ಷದ ನಾಟಕಗಳಾದ "ಝುಜ್" ಹಾಗೂ ಕಾಲೇಜಿನ ವಿಧ್ಯಾರ್ಥಿನಿ ಅಭಿನಯಿಸಿದ ಏಕಪಾತ್ರ ನಾಟಕ "ಮಾಗ್ದಾಲಾಚಿ ಮರಿ" ಪ್ರದರ್ಶನಗೊಂಡಿದ್ದವು.
*ಪಾದುವ ರಂಗ ಅಧ್ಯಯನ ಕೇಂದ್ರ* ಪ್ರತೀ ವರ್ಷ ತನ್ನ ನಾಟಕಗಳ ಹಬ್ಬವನ್ನು ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಆಚರಿಸುತ್ತದೆ.