ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಇವರು ಫಾ. ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಮುಖ್ಯ ಅತಿಥಿಯಾಗಿ ಫಾ. ಮುಲ್ಲರ್ ಆಸ್ಪತ್ರೆಯ ಸಂಚಾಲಕರಾದ ರೆ. ಫಾ. ರಿಚರ್ಡ್ ಕುವೆಲ್ಲೊರವರು ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಕ್ತದಾನವು ಎಲ್ಲಾ ದಾನಗಳಿಗಿಂತ ಮಿಗಿಲಾದದ್ದು, ಜನರ ಒಂದು ಒಳ್ಳೆ ಮನಸ್ಸು ಹಲವಾರು ಜೀವಗಳನ್ನು ಉಳಿಸಲು ಸಾದ್ಯವಾಗುತ್ತದೆ, ಇಂತಹ ಜಾಗೃತಿ ಮನೋಭಾವ ವಿದ್ಯಾರ್ಥಿಗಳಿಗೆ ಮೂಡಿಸಬೇಕಾದದು ಅತ್ಯಗತ್ಯ, ಹಾಗೂ ಇಂತಹ ಶಿಬಿರಗಳಿಂದ ಅದು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರಾದ ರೆ. ಫಾ. ಆಲ್ವಿನ್ ಸೆರಾವೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿಯಾದ ಶ್ರೀಧರ್, ರೆಡ್ ಕ್ರಾಸ್'ನ ಸಂಚಾಲಕರಾದ ಡೀನತ್ ಡೇಸಾ, ವಿದ್ಯಾರ್ಥಿ ನಾಯಕರಾದ ಕೀತ್ ವೇಗಸ್, ಮತ್ತು ಎನ್.ಎಸ್.ಎಸ್. ಘಟಕ ನಾಯಕ ಅಭಿಷೇಕ್ ಉಪಸ್ಥಿತತರಿದ್ದರು. ಸ್ವಯಂಸೇವಕ ವಿವನ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ರಾಜಲಕ್ಷ್ಮಿ ವಂದಿಸಿದರು. 99 ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.