ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪಾದುವ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2021-22 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಮಾರ್ಚ್ ದಿನಾಂಕ 4 ರಿಂದ 10 ರ ವರೆಗೆ ಸಂತ ತೋಮಸರ ಹಿರಿಯ ಪ್ರಾಥಮಿಕ ಶಾಲೆ, ವಗ್ಗ, ನೀರ್ಕಾನ ಇಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಸೈಂಟ್ ತೋಮಸ್ ಅಪೊಸ್ತಲಿಕ್ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಲಿಯೋ ವಿಲಿಯಂ ಲೋಬೊ ಇವರು ಮಾತನಾಡಿ ಕಲಿಕೆಯ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗಲು ರಾ. ಸೇ. ಯೋ. ಅತ್ಯಗತ್ಯ ಎಂದು ಹೇಳಿದರು.
ಕಾಲೇಜಿನ ಸಂಚಾಲಕರಾದ ರೆ| ಫಾ| ವಿನ್ಸೆಂಟ್ ಮೊಂತೇರೊ ಅವರು ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಫ್ರೊ| ರಾಜನ್ ವಿ. ಎನ್. ಅಧ್ಯಕ್ಷತೆಯನ್ನು ವಹಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಜನಿ, ನೀರ್ಕಾನ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ಬೆನ್ನಿಸ್, ಹೋಲಿ ಫ್ಯಾಮಿಲಿ ಕಾನ್ವೆಂಟ್ ನ ಮುಖ್ಯಸ್ಥರಾದ ಸಿ| ಉಷಾ, ಸಂತ ತೋಮಸರ ಹಿ. ಪ್ರಾ. ಶಾಲೆಯ ಮುಖ್ಯೋಪಧ್ಯಾಯಿನಿ ಶ್ರೀಮತಿ ಜೆಸಿಂತಾ ಡಿಸೋಜ, ಸರಕಾರಿ ಪದವಿ ಪೂರ್ವ ಕಾಲೇಜು ವಗ್ಗ ಇದರ ಪ್ರಾಂಶುಪಾಲರಾದ ಶೀ ಸಮಿಯುಲ್ಲ ಇವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾ. ಸೇ. ಸಂಯೋಜನಾಧಿಕಾರಿ ಶ್ರೀ ರೋಶನ್ ಸಂತುಮಯೊರ್ ಸ್ವಾಗತಿಸಿದರು. ರಾ. ಸೇ. ಯೋ. ಘಟಕದ ನಾಯಕ ಕು. ಅಕ್ಷಯ್ ಶೆಟ್ಟಿ ಮತ್ತು ನಾಯಕಿ ಕು. ಸ್ವಾತಿ ಉಪಸ್ಥಿತರಿದ್ದರು. ಏಳು ದಿನಗಳ ಈ ಶಿಬಿರದಲ್ಲಿ ಒಟ್ಟು 102 ಶಿಬಿರಾರ್ಥಿಗಳು ಭಾಗವಹಿಸಿದ್ದರು