ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ಪ್ರಸಕ್ತ ವರ್ಷದ ಸರ್ಟಿಫಿಕೇಟ್ ಕೋರ್ಸುಗಳನ್ನು ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ನಿರ್ದೇಶಕರಾದ *ಶ್ರೀ. ಮುರಳಿ ನಾಯರ್* ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಕೇವಲ ಶೈಕ್ಷಣಿಕವಾಗಿ ಸಿಗುವಂತಹ ಪ್ರಮಾಣ ಪತ್ರಗಳು ಇತ್ತೀಚಿನ ಕಾಲದಲ್ಲಿ ಉದ್ಯೋಗವನ್ನು ದೊರಕಿಸಿಕೊಡಲು ಸಾಕಾಗುವುದಿಲ್ಲ. ಹಾಗಾಗಿ ಇಂತಹ ಹೆಚ್ಚಿನ ಕಲಿಕಾ ವಿಷಯಗಳಿಂದ ನಮ್ಮಲ್ಲಿನ ಜ್ಞಾನ ಮಾತ್ರವಲ್ಲ ಬದಲಾಗಿ ಉತ್ತಮ ಉದ್ಯೋಗವನ್ನು ಪಡೆಯಲು ಸಹಕಾರಿಯಾಗುತ್ತದೆ. ಮತ್ತೋರ್ವ ಅತಿಥಿಯಾಗಿ ಆಗಮಿಸಿದ *ಶ್ರೀಮತಿ ವಿಜಯಾ ಶೆಟ್ಟಿ* ಯವರು ಈ ಹೆಚ್ಚಿನ ಪ್ರಮಾಣ ಪತ್ರಗಳು ನಿಮ್ಮ ಜೀವನದಲ್ಲಿರುವ ಗುರಿಯನ್ನು ತಲುಪಲು ಮತ್ತಷ್ಟು ಸಹಾಯ ಒದಗಿಸುತ್ತವೆ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತನ್ನಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ *ವಂದನೀಯ ಆಲ್ವಿನ್ ಸೆರಾವೊ* ರವರು ಮಾತನಾಡಿ ಯಾವುದೇ ಶಿಕ್ಷಣವು ಉದ್ಯೋಗಪೂರಕವಾದ ಶಿಕ್ಷಣವನ್ನು ನೀಡುತ್ತಿಲ್ಲ. ಇಡೀ ವ್ಯವಸ್ಥೆ ಬದಲಿಸುವುದು ಕಷ್ಟಕರವಾದ ವಿಷಯ, ಹಾಗಾಗಿ ಇಂತಹ ಹೆಚ್ಚಿನ ಶಿಕ್ಷಣದ ಮಾರ್ಪಾಡುಗಳಿಂದ ಪದವಿ ಶಿಕ್ಷಣ ಮುಗಿಸಿದ ತಕ್ಷಣ ಉದ್ಯೋಗ ದೊರೆತು, ನಿರುದ್ಯೋಗದ ನಿವಾರಣೆಗೆ ಉಪಯುಕ್ತವಾಗುತ್ತದೆ ಎಂದು ನುಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ *ರೋಶನ್ ಸಾಂತುಮಾಯರ್* ಸರ್ಟಿಫಿಕೇಟ್ ಕೋರ್ಸುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಏವಿಯೇಶನ್ ಸರ್ಟಿಫಿಕೇಟ್ ಕೋರ್ಸಿನ ಸಂಚಾಲಕಿಯಾದ ಶ್ರೀಮತಿ ಜೆನ್ನಿಫರ್ ರೋಬರ್ಟ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾದುವ ಕಾಲೇಜಿನಲ್ಲಿ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್ ಟ್ಯಾಲಿ, ಬ್ಯಾಂಕಿಂಗ್, ಶಾಸ್ರೀಯ ನೃತ್ಯ, ಎವಿಯೇಶನ್ ಆ್ಯಂಡ್ ಹಾಸ್ಪಿಟ್ಯಾಲಿಟಿ, ಹಾಗೂ ರಂಗಭೂಮಿ ಇಂತಹ ವಿಷಯಗಳಲ್ಲಿ ತರಬೇತಿಯನ್ನು ವರ್ಷ ಪೂರ್ತಿ ನೀಡಲಾಗುತ್ತದೆ. ಸುಮಾರು ಇನ್ನೂರು ವಿದ್ಯಾರ್ಥಿಗಳು ಈ ಕೋರ್ಸ್ ಗಳ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಪಾದುವ ರಂಗ ಅಧ್ಯಯನ ಕೇಂದ್ರದ ಉಪನ್ಯಾಸಕ ಕ್ತಿಸ್ಟೋಫರ್ ಸ್ವಾಗತಗೈದರೆ, ಮತ್ತೋರ್ವ ಉಪನ್ಯಾಸಕಿ ಶ್ರೀಮತಿ ಜೆಸ್ಫ್ರೀಡಾ ಧನ್ಯವಾದಗೈದರು. ಉಪನ್ಯಾಸಕಿ ಕು. ಸೀಮಾ ಕಾರ್ಯಕ್ರಮವನ್ನು ನಿರೂಪಿಸಿದರು.